ಹರ್ವಂತ್ ಕೌರ್ (ಜನನ ೫ ಜುಲೈ ೧೯೮೦) ಒಬ್ಬ ಭಾರತೀಯ ಡಿಸ್ಕಸ್ ಎಸೆತಗಾರ್ತಿ ಮತ್ತು ಶಾಟ್ ಪುಟರ್. ಇವರು ೨೦೦೨ ರ ಏಷ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದರು. ೨೦೦೩ ರ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ನಾಲ್ಕನೇ ಸ್ಥಾನ ಮತ್ತು ೨೦೦೬ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಏಳನೇ ಸ್ಥಾನ ಪಡೆದರು. ಜೊತೆಗೆ ಅವರು ೨೦೦೪ ರ ಒಲಂಪಿಕ್ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದರು ಮತ್ತು ಅರ್ಹತಾ ಸುತ್ತುಗಳಲ್ಲಿ ೧೩ ನೇ ಶ್ರೇಯಾಂಕವನ್ನು ಪಡೆದರು. ಆಕೆಯ ವೈಯಕ್ತಿಕ ಕೋಚ್ ಪರ್ವೀರ್ ಸಿಂಗ್. ೨೦೧೦ ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ, ಡಿಸ್ಕಸ್ ಥ್ರೋ ಸ್ಪರ್ಧೆಯಲ್ಲಿ ಅವರು ಬೆಳ್ಳಿ ಪದಕವನ್ನು ಗೆದ್ದರು. ಆಕೆಯ ವೈಯಕ್ತಿಕ ಅತ್ಯುತ್ತಮ ಎಸೆತವು ೬೩.೦೫ ಮೀಟರ್‌ಗಳು. ಆಗಸ್ಟ್ ೨೦೦೪ ರಲ್ಲಿ ಕೈವ್‌ನಲ್ಲಿ ಸಾಧಿಸಲಾಯಿತು. ಇವರು ೨೦೦೮ ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದರು. ಆದರೆ ಫೈನಲ್‌ಗೆ ತಲುಪಲು ವಿಫಲರಾದರು ಮತ್ತು ಅರ್ಹತಾ ಪಂದ್ಯಗಳಲ್ಲಿ ೫೬.೪೨ ಮೀ ಎಸೆಯುವ ಮೂಲಕ ೧೭ ನೇ ಶ್ರೇಯಾಂಕವನ್ನು ಪಡೆದರು. == ಸಹ ನೋಡಿ == ೨೦೦೮ ರ ಒಲಿಂಪಿಕ್ಸ್‌ಗಾಗಿ ಭಾರತೀಯ ತಂಡ. == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ವಿಶ್ವ ಅಥ್ಲೆಟಿಕ್ಸ್ನಲ್ಲಿ ಹರ್ವಂತ್ ಕೌರ್. [[ವರ್ಗ:ಜೀವಂತ ವ್ಯಕ್ತಿಗಳು]]